November 25, 2024

ಸಂತ ಗರೀಬ್‌ದಾಸರ ಜೀವನ ಪರಿಚಯ [kannada]

Published on

spot_img

ಸಂತ ಗರೀಬ್‌ದಾಸರ ಜನನ ಹರಿಯಾಣ ಪ್ರಾಂತ್ಯದ ಜಝ್ಝರ್ ಜಿಲ್ಲೆಯ ಛುಡಾನೀ ಊರಿನಲ್ಲಿ 1717 (ವಿಕ್ರಮೀ ಸಂವತ್ಸರ 1774) ರಲ್ಲಾಯ್ತು. ಛುಡಾನೀ ಊರಿನಲ್ಲಿ ಗರೀಬ್‌ದಾಸ ಮಹಾರಾಜರ ತಾಯಿಯ ತವರು ಮನೆಯಿದೆ. ಇವರು ಕರೌಂಥಾ (ಜಿಲ್ಲೆ, ರೋಹ್ತಕ್ ರ‍್ಯಾಣ) ದಲ್ಲಿ ಇರುವ ಧನ್‌ಖಡ್ ಗೋತ್ರದವರಾಗಿದ್ದರು. ಇವರ ತಂದೆ ಶ್ರೀ ಬಲರಾಮರ ವಿವಾಹ ಛುಡಾನೀ ಊರಿನಲ್ಲಿ ಶ್ರೀ ಶಿವಲಾಲ್ ಸಿಹಾಗ್‌ರವರ ಮಗಳು ರಾಣಿದೇವಿಯೊಡನೆ ಆಗಿತ್ತು. ಶ್ರೀಶಿವಲಾಲರಿಗೆ ಗಂಡು ಸಂತಾನವಿರಲಿಲ್ಲ. ಇದಕ್ಕಾಗಿ ಶ್ರೀ ಬಲರಾಮನನ್ನು ಮನೆ ಅಳಿಯನಾಗಿ ಇಟ್ಟುಕೊಂಡಿರಲಾಗಿತ್ತು. ಛುಡಾನೀ ಊರಿನಲ್ಲಿದ್ದು 12 ವರ್ಷಗಳು ಉರುಳಿದ್ದವು, ಆಗ ಸಂತ ಗರೀಬ್‌ದಾಸ್ ಮಹಾರಾಜರ ಜನ್ಮ ಛುಡಾನೀ ಊರಿನಲ್ಲಾಗಿತ್ತು. ಶ್ರೀ ಶಿವಲಾಲರ ಬಳಿ 2500 ಬೀಘಾ (ಜಮೀನಿನ ಅಳತೆ) ದೊಡ್ಡ ಅಳತೆ ಅದು ವರ್ತಮಾನದ ಅಳತೆಗಿಂತ 2.75 ಪಟ್ಟು ದೊಡ್ಡದಾಗಿತ್ತು) ಜಮೀನಿತ್ತು. ಅದು ವರ್ತಮಾನದಲ್ಲಿ 1400 ಎಕರೆ ಆಗುತ್ತದೆ (2500 2.75/5 ಅಂದರೆ 1375 ಎಕರೆ) ಆ ಎಲ್ಲಾ ಜಮೀನಿಗೆ ವಾರಸುದಾರ ಶ್ರೀ ಬಲರಾಮರಾದರು. ಅಂತೆಯೇ ಅವರ ಬಳಿಕ ಅವರ ಒಬ್ಬನೇ ಪುತ್ರ ಸಂತ ಗರೀಬ್‌ದಾಸರು ಆ ಇಡೀ ಜಮೀನಿಗೆ ವಾರಸುದಾರರಾದರು. ಆ ಸಮಯದಲ್ಲಿ ಪಶು ಸಾಕಣೆ ಹೆಚ್ಚಾಗಿತ್ತು. ಸರಿಸುಮಾರು 150 ಹಸುಗಳನ್ನು ಶ್ರೀ ಬಲರಾಮರು ಸಾಕಿದ್ದರು. ಅವುಗಳನ್ನು ಮೇಯಿಸಲು ತಮ್ಮ ಪುತ್ರ ಗರೀಬ್‌ದಾಸರೊಡನೆ ಬೇರೆ ಹಲವು ಗೊಲ್ಲರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು, ಅವರೂ ಹಸುಗಳನ್ನು ಮೇಯಿಸಲು ಹೊಲಗಳಲ್ಲಿ ಕರೆದೊಯ್ಯುತ್ತಿದ್ದರು.

10 ವರ್ಷದ ಬಾಲಕ ಗರೀಬ್‌ದಾಸರರು ಪೂರ್ಣ ಪರಮಾತ್ಮ ಕಬೀರ ಸಾಹೇಬರೊಡನೆ ಭೇಟಿ

 ಆ ಸಮಯ ಸಂತಗರೀಬ್‌ದಾಸರು 10 ವರ್ಷ ವಯಸ್ಸಿನವರಾಗಿದ್ದರು, ಅವರು ಹಸುಗಳನ್ನು ಮೇಯಿಸಲು ಅನ್ಯ ಗೊಲ್ಲರೊಡನೆ ನಲಾ ಹೆಸರಿನ ಹೊಲದಲ್ಲಿ ಹೋಗಿದ್ದರು. ಫಾಲ್ಗುಣ ತಿಂಗಳಿನ ಶುದ್ಧ ದ್ವಾದಶಿಯ ದಿನದಂದು ಸರಿಸುಮಾರು 10 ಘಂಟೆಗೆ ಪರಮ ಅಕ್ಷರ ಬ್ರಹ್ಮ ಒಬ್ಬ ಜೀವಂತ ಮಹಾತ್ಮದ ವೇಶದಲ್ಲಿ ಸಿಕ್ಕಿದರು. ಕಬಲಾನಾ ಊರಿನ ಗಡಿಗೆ ಹೊಂದಿಕೊAಡು ನಲಾ ಹೊಲವಿದೆ. ಎಲ್ಲ ಗೊಲ್ಲರೂ ಒಂದು ಬನ್ನೀಮರದ ಕೆಳಗೆ ಕುಳಿತು ಊಟ ಮಾಡುತ್ತಿದ್ದರು. ಈ ಮರವು ಕಬಲಾನಾದಿಂದ ಛುಡಾನಿಗೆ ಹೋಗುವ ಕಾಲು ದಾರಿಯಲ್ಲಿತ್ತು. ವರ್ತಮಾನದಲ್ಲಿ ಸರಕಾರವು ಆ ದಾರಿಯನ್ನು ರಸ್ತೆಯನ್ನಾಗಿ ನಿರ್ಮಾಣ ಮಾಡಿದೆ. ಪರಮೇಶ್ವರರು ಸತ್ಯಲೋಕದಿಂದ ಬಂದು, ಹೊಲದ ಹತ್ತಿರವಿರುವ ಮರದಿಂದ ಸ್ವಲ್ಪ ದೂರದಲ್ಲಿಯೇ ಇಳಿದರು. ಕಬಲಾನಾ ದಾರಿ ಕಡೆಗೆ ಛುಡಾನೀಗೆ ಹೋಗ ತೊಡಗಿದರು. ಯಾವಾಗ ಗೊಲ್ಲರ ಬಳಿ ಬಂದರೋ, ಗೊಲ್ಲರು ಹೇಳಿದರು, ಬಾಬಾರವರೇ ಆದೇಶವಾಗಲಿ! ರಾಮ್ ರಾಮ್! ಪರಮೇಶ್ವರರು ಹೇಳಿದರು – ರಾಮ್ ರಾಮ್! ಗೊಲ್ಲರು ಹೇಳಿದರು – ಬಾಬಾರವರೇ! ಊಟ ಮಾಡಿ.

ಆಗ ಪರಮೇಶ್ವರರು ತಾನು ತನ್ನ ಊರಿನಲ್ಲಿಯೇ ಊಟ ತಿಂದು ಬಂದಿರುವುದಾಗಿ ಹೇಳಿದರು. ಗೊಲ್ಲರು ಹೇಳಿದರೇನೆಂದರೆ ಮಹಾರಾಜರೇ! ಊಟ ಮಾಡದಿದ್ದರೆ ಹಾಲನ್ನಾದರೂ ಅವಶ್ಯವಾಗಿ ಕುಡಿಯಲೇಬೇಕು. ನಾವು ಅತಿಥಿಗೆ ಸ್ವಲ್ಪ ಯೇನಾದರೂ ಕುಡಿಸದೆ ತಿನ್ನಿಸದೆ ಹೋಗಲು ಬಿಡಲಾರೆವು. ಪರಮೇಶ್ವರರು ಹೇಳಿದರು – ನನಗೆ ಹಾಲನ್ನು ಕುಡಿಸಿ ಮತ್ತು ಕೇಳಿ! “ನಾನು ಕುವರೀ ಹಸುವಿನ ಹಾಲನ್ನು ಕುಡಿಯುತ್ತೇನೆ. ಆಗ ಹಿರಿಯ ಗೊಲ್ಲರೇನಿದ್ದರು, ಅವರು ಹೇಳಿದರೇನೆಂದರೆ

 ತಾವಂತು ತಮಾಷೆ ಮಾಡುತ್ತಿರುವಿರಿ. ತಮಗೆ ಹಾಲು ಕುಡಿಯುವ ಆಶಯವಿಲ್ಲ. ಕುವರೀ ಹಸು ಎಲ್ಲಾದರೂ ಹಾಲು ಕೊಡುತ್ತದೆಯೇ? ಪರಮೇಶ್ವರರು ಮತ್ತೆ ಹೇಳಿದರು “ನಾನು ಕುವರೀ ಹಸುವಿನ ಹಾಲು ಕುಡಿಯುವೆ.

ಪರಮೇಶ್ವರ ಕಬೀರರ ಮೂಲಕ ಸಂತ ಗರೀಬ್ ದಾಸ ಹಾಗು ಅನ್ಯ ಗೊಲ್ಲರ ಎದುರು ಕಡಸು ಹಸುವಿನ ಹಾಲು ಕುಡಿಯುವುದು

ಗರೀಬ್‌ದಾಸ್ ಬಾಲಕನು ಒಂದು ಕರುವನ್ನು, ಅದರ ವಯಸ್ಸು 1.5 ವರ್ಷದ್ದಾಗಿತ್ತು. ಜೀವಂತ ಬಾಬಾ ಬಳಿ ತಂದು ನಿಲ್ಲಿಸಿದನು. ಪರಮಾತ್ಮನು ಕರುವಿನ ಸೊಂಟದ ಮೇಲೆ ಆಶೀರ್ವಾದ ಭರಿತ ಕೈಯನ್ನಿಟ್ಟರು. ಕರುವಿನ ಕೆಚ್ಚಲು ಉದ್ದುದ್ದವಾಯ್ತು. ಒಂದು ಮಣ್ಣಿನ ಪಾತ್ರೆ, ಸಾಧಾರಣ 5 ಕಿ.ಗ್ರಾಂ. ಹಿಡಿಯುವಷ್ಟು ಪಾತ್ರೆಯನ್ನು ಕರುವಿನ ಕೆಚ್ಚಲ ಕೆಳಗೆ ಇಡಲಾಯ್ತು. ಕೆಚ್ಚಲಿನಿಂದ ತಂತಾನೆ ಹಾಲು ಹೊರಡಲಾರಂಭವಾಯ್ತು. ಮಣ್ಣಿನ ಪಾತ್ರೆ ತುಂಬಿದ ಬಳಿಕ ಹಾಲು ಇಳಿಯುವುದು ನಿಂತು ಹೋಯ್ತು. ಮೊದಲು ಜೀವಂತ ಬಾಬಾ ಕುಡಿದರು; ಉಳಿದ ಹಾಲು ಅನ್ಯ ಗೊಲ್ಲರಿಗೆ ಕುಡಿಯಲು ಹೇಳಿದರೆ ಹಿರಿಯಗೊಲ್ಲರು (ಸಂಖ್ಯೆಯಲ್ಲಿ 10-12 ಜನ ಇದ್ದರು) ಹೇಳ ತೊಡಗಿದರು ಏನೆಂದ್ರೆ ಬಾಬಾರವರೇ – ಕುವರೀ ಹಸುವಿನ ಹಾಲಂತು ಪಾಪದ ಹಾಲಾಗಿದೆ, ನಾವು ಕುಡಿಯಲಾರೆವು. ಎರಡನೆಯದು ತಾವು ಯಾವ ಜಾತಿಯವರೋ ನಮಗೆ ತಿಳಿದಿಲ್ಲ? ತಮ್ಮ ಎಂಜಲಾದ ಹಾಲು ನಾವು ಕುಡಿಯಲಾರೆವು.

3ನೆಯದು ಈ ಹಾಲು ತಾವು ಜಾದೂ-ಮಂತ್ರ ಮಾಡಿ ತೆಗೆದಿರುವಿರಿ ನಮ್ಮೆಲ್ಲರ ಮೇಲೆ ಜಾದೂ-ಮಂತ್ರದ ಕೆಟ್ಟ ಪ್ರಭಾವವಾಗುವುದು. ಇಷ್ಟು ಹೇಳಿ ಆ ಮರದ ಕೆಳಗೆ ಕುಳಿತವರು, ಅಲ್ಲಿಂದ ಹೊರಟು ಹೋದರು. ದೂರ ಹೋಗಿ ಯಾವುದೋ ಮರದ ಕೆಳಗೆ ಕುಳಿತರು. ಆಗ ಬಾಲಕ ಗರೀಬ್‌ದಾಸ ಹೇಳಿದ – ಹೇ ಬಾಬಾರವರೇ! ತಮ್ಮ ಎಂಜಲಾದ ಹಾಲು ಅಮೃತವಾಗಿದೆ. ನನಗೆ ಕೊಡಿ, ಸ್ವಲ್ಪ ಹಾಲನ್ನು ಬಾಲಕ ಗರೀಬ್‌ದಾಸ ಕುಡಿದನು. ಪರಮೇಶ್ವರ ಜೀವಂತ ವೇಶಧಾರಿಯು ಸಂತ ಗರೀಬ್‌ದಾಸರಿಗೆ ಜ್ಞಾನೋಪದೇಶ ನೀಡಿದರು. ತತ್ವಜ್ಞಾನ (ಸೂಕ್ಷö್ಮವೇದದ ಜ್ಞಾನ) ಹೇಳಿದರು. ಸಂತ ಗರೀಬ್‌ದಾಸರು ಅಧಿಕವಾಗಿ ಆಗ್ರಹಿಸಿದ ಕಾರಣ ಪರಮೇಶ್ವರರು ಅವರ ಆತ್ಮವನ್ನು ಶರೀರದಿಂದ ಬೇರ್ಪಡಿಸಿ ಮೇಲಿನ ಆತ್ಮಿಕ ಸಂಬAಧದ ಮಂಡಲಗಳ ಸುತ್ತಾಟ ಮಾಡಿಸಿದರು.

 ಸಂತ ಗರೀಬ್‌ದಾಸರಿಗೆ ಸತ್ಯಲೊಕ ಹಾಗು ಅನ್ಯ ಲೋಕಗಳ ದರ್ಶನ ಮಾಡಿಸುವುದು

 ಒಂದು ಮಂಡಲದಲ್ಲಿ ಮಾಡಿದಂಥಹ ಎಲ್ಲಾ ಲೋಕಗಳನ್ನು ತೋರಿಸಿದರು, ಶ್ರೀ ಬ್ರಹ್ಮಾ, ಶ್ರೀ ವಿಷ್ಣು ಹಾಗೂ ಶಿವರೊಡನೆ ಭೇಟಿಯಾಗಿಸಿದರು. ತದನಂತರ ಬ್ರಹ್ಮಲೋಕ ಹಾಗೂ ಶ್ರೀದೇವಿ (ದುರ್ಗೆ)ಯ ಲೋಕ ತೋರಿಸಿದರು. ಮತ್ತೆ 10 ನೇದ್ವಾರ (ಬ್ರಹ್ಮರಂಧ್ರ)ವನ್ನು ದಾಟಿ ಬ್ರಹ್ಮ ಕಾಲನ 21 ಬ್ರಹ್ಮಾಂಡಗಳ ಅಂತಿಮ ತುದಿಯ ಮೇಲೆ ಆದಂಥಹ 11ನೇ ದ್ವಾರವನ್ನು ದಾಟಿ ಅಕ್ಷರ ಪುರುಷನ 7 ಶಂಖ ಬ್ರಹ್ಮಾಂಡಗಳುಳ್ಳ ಲೋಕದಲ್ಲಿ ಪ್ರವೇಶಿಸಿದರು. ಸಂತಗರೀಬ್ ದಾಸರಿಗೆ ಸರ್ವ ಬ್ರಹ್ಮಾಂಡಗಳನ್ನು ತೋರಿಸಿದರು, ಅಕ್ಷರ ಪುರುಷರೊಡನೆ ಭೇಟಿ ಮಾಡಿಸಲಾಯ್ತು ಮೊದಲು ಅವರಿಗೆ 2 ಕೈಗಳನ್ನು ವಿಸ್ತರಿಸಿದರು. ಎಂದರೆ ಮಯೂರ (ನವಿಲು) ಪಕ್ಷಿ ತನ್ನ ರೆಕ್ಕೆಗಳನ್ನು (ಗರಿ) ಹರಡುವಂತೆ ಯಾವಾಗ ಅಕ್ಷರ ಪುರುಷನಿಗೆ ಸಂಕಟದ ಚಿಂತೆಯಾಗುತ್ತದೆ, ಆಗ ಹೀಗೆ ಮಾಡುತ್ತಾರೆ. ತನ್ನ ಶಕ್ತಿಯ ಪ್ರದರ್ಶನ ಮಾಡುತ್ತಾರೆ. ಯಾಕೆಂದರೆ ಅಕ್ಷರ ಪುರುಷನು ಅತೀ ಹೆಚ್ಚೆಂದರೆ 10 ಸಾವಿರ ಕೈಗಳನ್ನೇ ತೋರಿಸಬಲ್ಲರು. ಇವರಿಗೆ 10 ಸಾವಿರ ಕೈಗಳಿವೆ. ಕ್ಷರ ಪುರುಷನಿಗೆ 1 ಸಾವಿರ ಕೈಗಳಿವೆ. ಗೀತೆ ಅಧ್ಯಾಯ 10 ಶ್ಲೋಕ 11ರಲ್ಲಿ ತನ್ನ ಒಂದುಸಾವಿರ ಕೈಗಳುಳ್ಳ ವಿರಾಟ ರೂಪ ತೋರಿಸಿದ್ದನು.

ಗೀತೆ ಅಧ್ಯಾಯ 11 ಶ್ಲೋಕ 46ರಲ್ಲಿ ಅರ್ಜುನ ಹೇಳಿದ್ದೇನೆಂದರೆ – ಹೇ ಸಹಸ್ರಬಾಹು (1 ಸಾವಿರ ಭುಜಗಳುಳ್ಳವನು) ತನ್ನ ಚತುರ್ಭುಜ ರೂಪದಲ್ಲಿ ಬನ್ನಿ. ಸಂತ ಗರೀಬ್‌ದಾಸರಿಗೆ ಅಕ್ಷರ ಪುರುಷನ 7 ಶಂಖ ಬ್ರಹ್ಮಾಂಡಗಳ ಮರ್ಮ ಹೇಳಿ ಅಥವಾ ಕಣ್ಣಾರೆ ತೋರಿಸಿ ಪರಮೇಶ್ವರ ಜೀವಂತ ಬಾಬಾ 12ನೇ ದ್ವಾರದ ಎದುರಿಗೆ ಕರೆದೊಯ್ದರು ಅದು ಅಕ್ಷರ ಪುರುಷನ ಲೋಕದ ಗಡಿಯ ಮೇಲೆ ಮಾಡಲಾಗಿದೆ. ಅಲ್ಲಿಂದ ಭಂವರ್ ಗುಹೆಯೊಳಗೆ ಪ್ರವೇಶ ಮಾಡಲಾಗುತ್ತದೆ. ಜೀವಂತ ವೇಶಧಾರೀ ಪರಮೇಶ್ವರರು ಸಂತ ಗರೀಬ್‌ದಾಸರಿಗೆ ಹೇಳಿದರೇನೆಂದರೆ ಆ 10ನೇ ದ್ವಾರ (ಬ್ರಹ್ಮರಂಧ್ರ)ವೇನಿದೆ, ಅದನ್ನು ನಾನು ಸತ್ಯನಾಮದ ಜಪದಿಂದ ತೆರೆದಿದ್ದೆ. ಆ ಹನ್ನೊಂದನೇ (11) ದ್ವಾರವೇನಿದೆ, ಅದನ್ನು ನಾನು ‘ತಥ್’ ಹಾಗೂ ‘ಸತ್’ (ಸಾಂಕೇತಿಕ ಮಂತ್ರ) ನಿಂದ ತೆರೆದಿದ್ದೆ. ಅನ್ಯ ಯಾವುದೇ ಮಂತ್ರದಿAದ ಅವುಗಳ ಮೇಲೆ ಹಾಕಲಾಗಿರುವ ಬೀಗ (ಟoಛಿಞs)ಗಳನ್ನು ತೆರೆಯಲಸಾಧ್ಯ.

ಈಗ ಇಲ್ಲಿ ಹನ್ನೆರಡನೇ (12) ದ್ವಾರವಿದೆ, ಇದನ್ನು ನಾನು ಸತ್ ಶಬ್ದ (ಸಾರನಾಮ)ದಿಂದ ತೆರೆಯುವೆನು. ಇದರ ಹೊರತು ಯಾವುದೇ ನಾಮದ ಜಪದಿಂದ ಇದು ತೆರೆಯಲಾಗದು. ಆಗ ಪರಮಾತ್ಮನು ಮನದೊಳಗೆ ಸಾರನಾಮದ ಜಪಮಾಡಲಾಗಿ, 12 ದ್ವಾರ ತೆರೆಯಲ್ಪಟ್ಟಿತು. ಮತ್ತು ಪರಮೇಶ್ವರ ಜೀವಂತ ರೂಪದಲ್ಲಿ ಅಂತೆಯೇ ಸಂತ ಗರೀಬ್‌ದಾಸರ ಆತ್ಮ ಭಂವರ್ ಗುಹೆಯೊಳಗೆ ಪ್ರವೇಶಿಸಿದರು.

 10 ವರ್ಷದ ಸಂತ ಗರೀಬ್‌ದಾಸರಿಗೆ ಸತ್ಯಲೋಕದ ಅದ್ಭುತ ದೃಶ್ಯ ತೋರಿಸುವುದು

ಮತ್ತೆ ಸತ್ಯಲೋಕದೊಳಗೆ ಪ್ರವೇಶಿಸಿ ಆ ಶ್ವೇತ ಗುಮ್ಮಟದ ಎದುರಲ್ಲಿ ನಿಂತುಕೊAಡರು. ಅದರ ಮಧ್ಯದಲ್ಲಿ ಸಿಂಹಾಸನದ (ಉರ್ದುವಿನಲ್ಲಿ ಹಲಗೆ ಹೇಳುತ್ತಾರೆ) ಮೇಲೆ ತೇಜೋಮಯ ಶ್ವೇತ ನರ ರೂಪದಲ್ಲಿ ಪರಮ ಅಕ್ಷರ ಬ್ರಹ್ಮರು ವಿರಾಜಮಾನರಾಗಿದ್ದರು. ಅವರ ಒಂದು ರೋಮ (ಶರೀರದ ಕೂದಲು)ದಿಂದ ಇಷ್ಟೊಂದು ಪ್ರಕಾಶ ಹೊರಡುತ್ತಿತ್ತು, ಅದು ಕೋಟಿ ಸೂರ್ಯರು ಹಾಗೂ ಅಷ್ಟೇ ಚಂದ್ರರು ಸೇರಿ ಉಂಟಾಗುವ ಪ್ರಕಾಶಕ್ಕಿಂತಲೂ ಅಧಿಕವಾಗಿತ್ತು. ಇದರಿಂದ ತಿಳಿಯ ಬಹುದು ಏನೆಂದ್ರೆ ಆ ಪರಮ ಅಕ್ಷರ ಬ್ರಹ್ಮ (ಸತ್ಯ ಪುರುಷ)ನ ಸಂಪೂರ್ಣ ಶರೀರದ್ದು ಎಷ್ಟು ಪ್ರಕಾಶವಿರಬಹುದು? ಸತ್ಯಲೋಕ ಸ್ವತಃವೇ ವಜ್ರದಂತೆ ಪ್ರಕಾಶಮಾನವಾಗಿದೆ. ಆ ಪ್ರಕಾಶವನ್ನು ಆ ಪರಮೇಶ್ವರರ ಪವಿತ್ರ ಶರೀರದಿಂದ ಹಾಗೂ ಅದರ ಅಮರ ಲೋಕದಿಂದ ಹೊರಡುತ್ತಿದೆ, ಅದನ್ನು ಕೇವಲ ಆತ್ಮದ ಕಣ್ಗಳಿಂದ (ದಿವ್ಯದೃಷ್ಟಿ)ಲೇ ನೋಡಬಹುದಾಗಿದೆ. ಚರಮ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ.

 ಪುನಃ ಜೀವಂತ ಬಾಬಾ ತನ್ನೊಡನೆ ಬಾಲಕ ಗರೀಬ್‌ದಾಸರನ್ನು ಕರೆದೊಯ್ದು ಆ ಸಿಂಹಾಸನದ ಹತ್ತಿರ ಹೋದರು. ಹಾಗೂ ಅಲ್ಲಿ ಇಟ್ಟಿರುವ ಚಾಮರವನ್ನು ಎತ್ತಿ ಗದ್ದುಗೆ ಮೇಲೆ ಕುಳಿತ ಪರಮಾತ್ಮನ ಮೇಲೆ ಬೀಸಲಾರಂಭಿಸಿದರು. ಬಾಲಕ ಗರೀಬ್‌ದಾಸರು ವಿಚಾರ ಮಾಡಿದರೇನೆಂದರೆ – ಇವರು ಪರಮಾತ್ಮ, ಮತ್ತು ಈ ಬಾಬಾರವರು ಪರಮಾತ್ಮನ ಸೇವಕರು. ಅದೇ ಸಮಯ ತೇಜೋಮಯ ಶರೀರವುಳ್ಳ ಪ್ರಭು ಸಿಂಹಾಸನ ಬಿಟ್ಟು ನಿಂತುಕೊAಡರು, ಮತ್ತು ಜೀವಂತ ಬಾಬಾರವರ ಕೈಯಿಂದ ಚಾಮರ ತೆಗೆದುಕೊಂಡರು ಮತ್ತು ಜೀವಂತ ಬಾಬಾರವರನ್ನು ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಸಂಕೇತಿಸಿದರು. ಜೀವಂತ ವೇಶಧಾರೀ ಪ್ರಭು ಅಸಂS್ಯ ಬ್ರಹ್ಮಾಂಡಗಳ ಮಾಲೀಕರ ರೂಪದಂತೆ ಸಿಂಹಾಸನದ ಮೇಲೆ ಕುಳಿತರು. ಮೊದಲ ಪ್ರಭು ಜೀವಂತ ಬಾಬಾರವರ ಮೇಲೆ ಚಾಮರ ಬೀಸಲಾರಂಭಿಸಿದರು. ಸಂತ ಗರೀಬ್‌ದಾಸರು ಯೋಚಿಸುತ್ತಲೇ ಇದ್ದರು,

ಏನೆಂದರೆ ಇದರಲ್ಲಿ ಪರಮೇಶ್ವರರು ಯಾರಾಗಿರಬಹುದು? ಇಷ್ಟರಲ್ಲಿ ತೇಜೋಮಯ ಶರೀರವುಳ್ಳ ಪ್ರಭು ಜೀವಂತ ಬಾಬಾರವರ ಶರೀರದೊಳಗೆ ಸಮಾಗಮಿಸಿದರು, ಇಬ್ಬರೂ ಸೇರಿ ಒಂದಾದರು. ಜೀವಂತ ಬಾಬಾರವರ ಶರೀರದ ತೇಜಸ್ಸು ಅಷ್ಟೇ ಆಯ್ತು, ಎಂದರೆ ಮೊದಲು ಸಿಂಹಾಸನದ ಮೇಲೆ ಕುಳಿತ ತೇಜಸ್ಸಿನ ಸತ್ಯ ಪುರುಷನಷ್ಟು. ಕೆಲವೇ ಕ್ಷಣಗಳಲ್ಲಿ ಪರಮೇಶ್ವರರು ಹೇಳಿದರು – ಗರೀಬ್‌ದಾಸ! ನಾನು ಅಸಂಖ್ಯಾ ಬ್ರಹ್ಮಾಂಡಗಳ ಸ್ವಾಮಿಯಾಗಿದ್ದೇನೆ. ನಾನೇ ಸರ್ವ ಬ್ರಹ್ಮಾಂಡಗಳ ರಚನೆ ಮಾಡಿರುವೆನು. ಎಲ್ಲಾ ಆತ್ಮಗಳನ್ನು ವಚನದಿಂದ ನಾನೇ ರಚಿಸಿರುವೆ – 5 ತತ್ವಗಳು ಹಾಗೂ ಸರ್ವ ವಸ್ತುಗಳನ್ನು ನಾನೇ ರಚಿಸಿರುವೆ. ಕ್ಷರ ಪುರುಷ (ಬ್ರಹ್ಮ) ಹಾಗೂ ಅಕ್ಷರ ಪುರುಷ ಅಥವಾ ಅವರ ಲೋಕಗಳನ್ನೂ ನಾನೇ ಉತ್ಪನ್ನಿಸಿರುವೆ. ಇವರಿಗೆ ಇವರ ತಪದ ಬದಲಾಗಿ ಸರ್ವ ಬ್ರಹ್ಮಾಂಡಗಳ ರಾಜ್ಯ ನಾನೇ ಪ್ರದಾನಿಸಿರುವೆ. ನಾನು 120 ವರ್ಷಗಳ ತನಕ ಪೃಥ್ವೀ ಮೇಲೆ ಕಬೀರ ಹೆಸರಿಂದ ನೇಕಾರ ಭೂಮಿಕೆಯನ್ನು ಮಾಡಿ ಬಂದಿದ್ದೆ.

 ಪೂರ್ಣ ಪರಮಾತ್ಮ ಕಬೀರರ ಮುಖಾಂತರ ಕಾಶೀಯಲ್ಲಿ ಅವತರಣದ ಸತ್ಯ ಕಥೆ ತಿಳಿಸುವುದು

ಭಾರತದೇಶ (ಜಂಬೂದ್ವೀಪ) ದ ಕಾಶೀ ನಗರದ (ಬನಾರಸ್)ಲ್ಲಿ ನೀರೂ ನೀಮಾ ಹೆಸರುಳ್ಳ ಪತಿ-ಪತ್ನಿ ಇದ್ದರು. ಇವರು ಮುಸಲ್ಮಾನ ನೇಕಾರರಾಗಿದ್ದರು. ಇವರಿಗೆ ಮಕ್ಕಳಿರಲಿಲ್ಲ, ಜ್ಯೇಷ್ಠ ಶುದ್ಧ ಪೌರ್ಣಮಿಯಂದು ಬೆಳಿಗ್ಗೆ (ಬ್ರಹ್ಮ ಮುಹೂರ್ತ) ಲಹರತಾರಾ ಹೆಸರಿನ ಸರೋವರದಲ್ಲಿ ಕಾಶೀಯ ಹೊರಗೆ ಕಾಡಿನಲ್ಲಿ ನವಜಾತ ಶಿಶುವಿನಂತೆ ರೂಪಧರಿಸಿ ಕಮಲದ ಹೂ ಮೇಲೆ ಮಲಗಿದ್ದೆ, ನಾನು ನನ್ನ ಇದೇ ಸ್ಥಾನದಿಂದ ಗತಿಯಾಗಿ ಹೋಗಿದ್ದೆ. ನೀರೂ ನೇಕಾರ ಹಾಗೂ ಅವನ ಪತ್ನಿ ಪ್ರತೀನಿತ್ಯ ಅದೇ ಸರೋವರದಲ್ಲಿ ಸ್ನಾನಾರ್ಥಕ್ಕಾಗಿ ಹೋಗುತ್ತಿದ್ದರು. ಅಂದು ನನ್ನನ್ನು ಬಾಲಕ ರೂಪದಿ ಪ್ರಾಪ್ತಿಸಿ ಅತ್ಯಂತ ಸಂತುಷ್ಟರಾಗಿ ನನ್ನನ್ನ ತನ್ನ ಮನೆಗೆ ಕರೆದೊಯ್ದರು. ನಾನು 25 ದಿನಗಳ ತನಕ ಏನನ್ನೂ ಆಹಾರವಾಗಿ ಸೇವಿಸಿಲ್ಲ.

ಆಗ ಶಿವನೊಂದು ಸಾಧುವೇಶದಲ್ಲಿ ಅವರ ಮನೆಗೆ ಹೋದರು. ಅವೆಲ್ಲಾ ನನ್ನದೇ ಪ್ರೇರಣೆಯಾಗಿತ್ತು. ಶಿವನಲ್ಲಿ ನಾನು ಹೇಳಿದ್ದೆ – ನಾನು ಕುವರೀ ಹಸುವಿನ ಹಾಲನ್ನು ಕುಡಿಯುತ್ತೇನೆ. ಆಗ ನೀರೂ ಒಂದು ಕರು ತಂದ. ಶಿವನಿಗೆ ನಾನು ಶಕ್ತಿ ಪ್ರದಾನಿಸಿದೆ, ಅವರು ಕರುವಿನ ಸೊಂಟದ ಮೇಲೆ ತನ್ನ ಆಶೀರ್ವಾದ ಭರಿತ ಕೈಯನ್ನಿಟ್ಟರು. ಕುವರೀ ಹಸು ಹಾಲನ್ನಿತ್ತಾಗ ನಾನದನ್ನು ಕುಡಿದಿದ್ದೆ. ನಾನು ಪ್ರತೀ ಒಂದು ಯುಗದಲ್ಲಿ ಇಂಥಹ ಲೀಲೆ ಮಾಡುತ್ತೇನೆ. ಯಾವಾಗ ನಾನು ಶಿಶುರೂಪದಲ್ಲಿ ಪ್ರಕಟನಾಗುತ್ತೇನೆ, ಆಗ ಕುವರೀ ಹಸುಗಳಿಂದ ನನ್ನ ಪೋಷಣೆಯ ಲೀಲೆಯಾಗುತ್ತದೆ. ಹೇ ಗರೀಬ್‌ದಾಸ್! ನಾಲ್ಕೂ ವೇದಗಳು ನನ್ನ ಗುಣಗಾನ ಮಾಡುತ್ತಿವೆ.

 ವೇದ್ ಮೇರಾ ಭೇದ್ ಹೈ, ಮೈಂ ನಹೀಂ ವೇದನ್ ಕೆ ಮಾಂ ಹೀ | ಜಿಸ್ ವೇದ್ ಸೆ ಮೈಂ ಮಿಲೂಂ, ವಹ್ ವೇದ್ ಜಾನ್‌ತೇ ನಹೀಂ ||

 ಋಗ್ವೇದ ಮಂಡಲ 9 ಸೂಕ್ತಿ 1 ಮಂತ್ರ 9ರಲ್ಲಿ ಬರೆದಿದೆ, ಏನೆಂದರೆ ಯಾವಾಗ ಪರಮೇಶ್ವರನು ಶಿಶು ರೂಪದಲ್ಲಿ ಪೃಥ್ವೀ ಮೇಲೆ ಪ್ರಕಟರಾಗುತ್ತಾರೆ ಆಗ ಅವರ ಪೋಷಣೆಯ ಲೀಲೆ ಕುವರೀ ಹಸುಗಳ ಮೂಲಕ ಆಗುತ್ತದೆ. ನಾನು ಸತ್ಯಯುಗದಲ್ಲಿ “ಸತ್ಯಸುಕತ’ ಹೆಸರಿಂದ ಪ್ರಕಟನಾಗಿದ್ದೆ. ತ್ರೇತಾಯುಗದಲ್ಲಿ “ಮುನೀಂದ್ರ” ಹೆಸರಿಂದ ಹಾಗೂ ದ್ವಾಪರದಲ್ಲಿ “ಕರಣಾಮಯ” ಹೆಸರಿಂದ ಮತ್ತು ಸಂವತ್ಸರ 1455 ಜ್ಯೇಷ್ಠ ಶುದ್ಧ ಪೌರ್ಣಮಿಗೆ ನಾನು ಕಲಿಯುಗದಲ್ಲಿ “ಕಬೀರ ಹೆಸರಿಂದ ಪ್ರಕಟ ಅಥವಾ ಪ್ರಸಿದ್ಧನಾಗಿದ್ದೆ. ಇದೆಲ್ಲಾ ಪ್ರಸಂಗ ಕೇಳಿ ಸಂತ ಗರೀಬ್‌ದಾಸರು ಹೇಳಿರು – ಸಂರಕ್ಷಕ! ಈ ಜ್ಞಾನ ನನಗೆ ಹೇಗೆ ನೆನಪುಳಿಯುವುದು? ಆಗ ಪರಮೇಶ್ವರರು ಬಾಲಕ ಗರೀಬ್‌ದಾಸರಿಗೆ ಆಶೀರ್ವಾದ ನೀಡಿ ಹೇಳಿದರು. ನಾನು ನಿನ್ನ ಜ್ಞಾನಯೋಗವನ್ನು ತೆರೆದಿರುವೆನು. ಆಧ್ಯಾತ್ಮ ಜ್ಞಾನ ನಿನ್ನ ಅಂತಃಕರಣದಲ್ಲಿ ಹಾಕಲಾಗಿದೆ. ಈಗ ತಾನು ಅಸಂಖ್ಯಾ ಯುಗಗಳ ಮೊದಲಿಂದ ಹಿಡಿದು ವರ್ತಮಾನ ಹಾಗೂ ಭವಿಷ್ಯದ ಜ್ಞಾನ ಕೂಡಾ ನೆನಪಿನಲ್ಲಿಟ್ಟುಕೊಳ್ಳುವೆ.

ಸಂತ ಗರೀಬ್ ದಾಸರಿಗೆ ಮೃತನೆಂದು ತಿಳಿದು ಅಂತ್ಯ ಸಂಸ್ಕಾರದ ಸಿದ್ಧತೆ

 ಇನ್ನೊಂದೆಡೆ ಕೆಳಗೆ ಪೃಥ್ವೀ ಮೇಲೆ ಸಂಜೆಯ 3 ಘಂಟೆಯ ಅಕ್ಕ ಪಕ್ಕ ಉಳಿದ ಗೊಲ್ಲರಿಗೆ ನೆನಪಾಯ್ತು, ಏನೆಂದ್ರೆ ಗರೀಬ್‌ದಾಸನಿಲ್ಲ ಎಬ್ಬಿಸಿ ಕರೆದುಕೊಂಡು ಬನ್ನಿ. ಆಗ ಒಬ್ಬ ಗೊಲ್ಲ ಹೋದ ಅವನು ದೂರದಿಂದ ಧ್ವನಿಯೆತ್ತಿ ಕರೆದ ಹೇ ಗರೀಬ್‌ದಾಸ! ಬಂದು ಬಿಡು ಹಸುಗಳ ಮುಂದೆ ನಿಂತು ತನ್ನ ಸರದಿಮಾಡು. ನಾವು ಬಹಳ ಹೊತ್ತಿನಿಂದ ನಿಂತಿದ್ದೇವೆ. ಭಕ್ತ ಗರೀಬ್‌ದಾಸರು ಮಾತಾಡಲಿಲ್ಲ. ಎದ್ದಿಲ್ಲ. ಏಕೆಂದರೆ ಪೃಥ್ವೀ ಮೇಲೆ ಕೇವಲ ಶರೀರವಿತ್ತು. ಜೀವಾತ್ಮವಂತು ಮೇಲಿನ ಮಂಡಲಗಳ ಸುತ್ತಾಟ ಮಾಡುತ್ತಿತ್ತು. ಆ ಗೊಲ್ಲನು ಹತ್ತಿರ ಹೋಗಿ ಕೈಯಿಂದ ಶರೀರವನ್ನು ಅಲುಗಾಡಿಸಿದರೆ ಶರೀರ ನೆಲದ ಮೇಲೆ ಬಿತ್ತು. ಮೊದಲು ಸುಖಾಸನದ ಮೇಲೆ ಸ್ಥಿರವಾಗಿತ್ತು. ಗೊಲ್ಲನು ನೋಡಿದರೆ ಬಾಲಕ ಗರೀಬ್‌ದಾಸ ಮೃತನಾಗಿದ್ದು ಕಂಡು ಬಂತು, ಗೊಲ್ಲನು ಅರಚಾಡಿದ. ಅನ್ಯ ಗೊಲ್ಲರು ಓಡಿಬಂದರು. ಅವರಲ್ಲೊಬ್ಬ ಛುಡಾನೀ ಊರಿನೆಡೆಗೆ ಓಡಿದ. ಛುಡಾನೀ ಊರಿನಿಂದ ಕಬಲಾನಾ ಊರಿನ ರಸ್ತೆಯಲ್ಲಿ ಆ ಬನ್ನೀವೃಕ್ಷವಿತ್ತು. ಅದರ ಕೆಳಗೆ ಪರಮೇಶ್ವರರು ಜೀವಂತ ರೂಪದಲ್ಲಿ ಗರೀಬ್‌ದಾಸರು ಮತ್ತು ಅನ್ಯ ಗೊಲ್ಲರೊಡನೆ ಕುಳಿತ್ತಿದ್ದರು. ಕಬಲಾನಾದ ಗಡಿಯೊಡನೆ ಆ ಹೊಲ ಹೊಂದಿಕೊAಡಿತ್ತು ಅದು ಛುಡಾನೀ ಊರಿನದಾಗಿತ್ತು. ಅದು ಗರೀಬ್‌ದಾಸರ ತನ್ನದೇ ಹೊಲವಾಗಿತ್ತು. ಆ ಸ್ಥಳ ಛುಡಾನೀ ಊರಿಂದ 1 1/2ಕಿ.ಮೀ. ದೂರವಿದೆ.

 ಛುಡಾನೀ ಊರಿಗೆ ಹೋಗಿ ಆ ಗೊಲ್ಲನು ಗರೀಬ್‌ದಾಸರ ತಂದೆ-ತಾಯಿ, ಅಜ್ಜ-ಅಜ್ಜಿಯರಿಗೆ ಎಲ್ಲಾ ಪರಿಸ್ಥಿತಿ ಹೇಳಿದ, ಎಂದರೆ ಒಬ್ಬ ಬಾಬಾ ಬಂದು ಕುವರೀ ಹಸುವಿನ ಹಾಲನ್ನು ಜಾದೂ-ಮಂತ್ರ ಮಾಡಿ ತೆಗೆದ, ಆ ಹಾಲನ್ನು ನಾವು ಕುಡಿಯಲಿಲ್ಲ. ಬಾಲಕ ಗರೀಬ್‌ದಾಸ ಕುಡಿದ. ನಾವು ಈಗ ನೋಡಿದರೆ ಅವನು ಸತ್ತು ಹೋಗಿದ್ದಾನೆ. ಮಗುವಿನ ಶವವನ್ನು ಚಿತೆಯ ಮೇಲಿಟ್ಟು ಅಂತಿಮ ಸಂಸ್ಕಾರದ ತಯಾರಿ ನಡೆಸಲಾಯ್ತು. ಅದೇ ಸಮಯದಿ ಪರಮೇಶ್ವರರು ಹೇಳಿದರು ಗರೀಬ್‌ದಾಸ! ತಾವು ಕೆಳಗೆ ಹೋಗಿ. ತಮ್ಮ ಶರೀರವನ್ನು ನಾಶಪಡಿಸಲಾಗುತ್ತಿದೆ. ಸಂತಗರೀಬ್‌ದಾಸರು ಕೆಳಗೆ ನೋಡಿದರೆ ಈ ಪೃಥ್ವೀ ಲೋಕವು ಸತ್ಯಲೋಕದ ಹೋಲಿಕೆಯಲ್ಲಿ ನರಕಲೋಕದ ಸಮಾನ ಕಾಣಿಸುತ್ತಿತ್ತು.

ಸಂತಗರೀಬ್‌ದಾಸರು ಹೇಳಿದರು ಹೇ ಪ್ರಭು! ನನ್ನನ್ನು ಕೆಳಗೆ ಕಳುಹಿಸದಿರಿ, ಇಲ್ಲೇ ಇರಿಸಿಕೊಳ್ಳಿ. ಆ ಸತ್ಯಪುರುಷ ಕಬೀರರು ಹೇಳಿದರು – ತಾನು ಮೊದಲು ಭಕ್ತಿ ಮಾಡುವೆ, ನಾನೇನು ಸಾಧನೆ ನಿನಗೆ ಹೇಳುವೆ, ಆ ಭಕ್ತಿಯ ಶಕ್ತಿ ಸಂಪಾದನೆಯಿAದ ಪುನಃ ಇಲ್ಲಿ ಸ್ಥಿರ ಸ್ಥಾನವನ್ನು ಪ್ರಾಪ್ತಿಸುವೆ. ಎದುರಲ್ಲಿ ನೋಡು ಅದು ನಿನ್ನ ಮಹಲು, ಅದು ಬರಿದಾಗಿದೆ. ಸರ್ವ ತಿನ್ನುವ ಖಾದ್ಯಗಳು ತುಂಬಿ ಬಿದ್ದಿವೆ. ಕೆಳಗೆ ಪೃಥ್ವೀ ಮೇಲೆ ಮಳೆಯಾದರೆ ಅನ್ನ ಸಿಗುವುದು. ಎಷ್ಟು ಶ್ರಮ ಪಡಬೇಕಾಗುತ್ತದೆ. ಇಲ್ಲಿಯಂತಹ ಪದಾರ್ಥಗಳು ಪೃಥ್ವೀ ಮೇಲೆ ಇಲ್ಲವೇ ಇಲ್ಲ. ತಾನು ಕೆಳಗೆ ಹೋಗು ಪ್ರಥಮ ಮಂತ್ರ ನಾನು ನಿನಗೆ ನೀಡಿದ್ದೇನೆ. ಮತ್ತೆ ಸತ್ಯನಾಮ ಕೂಡಾ ನಿನಗೆ ಪ್ರದಾನಿಸಲು ಬರುವೆನು. ಈ ಸತ್ಯನಾಮ 2 ಅಕ್ಷರದ್ದಾಗಿರುತ್ತದೆ. ಒಂದು ಓಂ ಅಕ್ಷರ ಇನ್ನೊಂದು ತತ್ (ಸಾಂಕೇತಿಕ) ಅಕ್ಷರವಾಗಿರುತ್ತದೆ. ಮತ್ತೆ ಕೆಲವು ಸಮಯದ ಬಳಿಕ ನಿನಗೆ ಸಾರನಾಮ ನೀಡುವೆನು. ಈ ಎಲ್ಲಾ ನಾಮಗಳ (ಪ್ರಥಮ,ದ್ವಿತೀಯ ಹಾಗೂ ತೃತೀಯ) ಸಾಧನೆ

ಮಾಡಿಯೇ ನೀನು ಇಲ್ಲಿ ಬರಲಾಗುವೆ. ನಾನು ಪ್ರತಿ ಉಸಿರಲ್ಲೂ ಭಕ್ತನೊಡನೆ ಇರುತ್ತೇನೆ, ನೀನು ಚಿಂತಿಸದಿರು. ಈಗ ತಾವು ಶೀಘ್ರ ಹೋಗಿರಿ.

ಇಷ್ಟು ಹೇಳಿ ಪರಮ ಅಕ್ಷರಪುರುಷರು ಸಂತ ಗರೀಬ್‌ದಾಸರ ಜೀವವನ್ನು ಶರೀರದೊಳಗೆ ಪ್ರವೇಶ ಮಾಡಿಸಿದರು. ಇಡೀ ಪರಿವಾರದ ಜನರು ಚಿತೆಗೆ ಬೆಂಕಿ ಇಡುವುದರಲ್ಲಿದ್ದರು, ಅದೇ ಸಮಯದಲ್ಲಿ ಮಗುವಿನ ಶರೀರದಲ್ಲಿ ಕಂಪನ ಉಂಟಾಯ್ತು. ಶವವನ್ನು ಹಗ್ಗದಿಂದ ಕಟ್ಟಿ ಕೊಂಡೊಯ್ಯುತ್ತಾರೆ. ಆ ಹಗ್ಗವು ತಂತಾನೆ ಕಡಿದು ಹೋಯ್ತು. ಸಂತ ಗರೀಬ್‌ದಾಸರು ಎದ್ದು ಕುಳಿತರು. ಚಿತೆಯಿಂದ ಕೆಳಗೆ ಇಳಿದು ನಿಂತುಕೊAಡರು. ಹಾಜರಿದ್ದ ಊರಿನ ಹಾಗೂ ಪರಿವಾರದ ಸಂತೋಷಕ್ಕೆ ಪಾರವೇ ಇರಲಿಲ್ಲ. ಗರೀಬ್‌ದಾಸರು ಮೇಲಕ್ಕೆ ಕಣ್ಗಳನ್ನು ಮಾಡಿ ಪರಮಾತ್ಮನನ್ನು ನೋಡುತ್ತಿದ್ದರು ಹಾಗೂ ಆ ಅಮೃತಜ್ಞಾನ ಪರಮೇಶ್ವರರು ಅವರ ಅಂತಃಕರಣದೊಳಗೆ ಹಾಕಿದ್ದರು, ಆ ಅಮೃತವಾಣಿ ದ್ವಿಪದಿ ಅಥವಾ ಚೌಪದಿಗಳು ಹಾಗೂ ಶಬ್ದಗಳ ರೂಪದಲ್ಲಿ ಕೇಳತೊಡಗಿದರು. ಊರಿನವರಿಗೆ ಆ ಅಮೃತವಾಣಿಯ ಜ್ಞಾನವಿರಲಿಲ್ಲ. ಇದಕ್ಕಾಗಿ ಅವರು ಯೋಚಿಸಿದರು – ಮಗುವಿಗೆ ಬಾಬಾ ಬೆದರಿಕೆ ಹಾಕಿರಬೇಕು, ಅದಕ್ಕಾಗಿ ಬಡಬಡಿಸುತ್ತಾನೆ, ಏನೇನೋ ಹೇಳುತ್ತಿದ್ದಾನೆ. ಆದರೆ ಪರಮಾತ್ಮನ ನೂರಾರು ಬಾರಿ ಧನ್ಯವಾದ ಅರ್ಪಿಸುತ್ತಿದ್ದರು. ಮಗಳ ಮಗ ಜೀವಿತಗೊಂಡನು. ಮರುಳನಾದರೂ ಹುಡುಗಿ ರಾಣೀದೇವೀ ತನ್ನ ಹೃದಯವನ್ನು ತಡೆದು ಖುಶಿಯಾಗಿರುತ್ತಿದ್ದಳು. ಮಹಾಪುರುಷ ಗರೀಬ್‌ದಾಸರನ್ನು ಮರುಳನೆಂದು ತಿಳಿದು (ಊರ ಭಾಷೆಯಲ್ಲಿ – ಮರುಳ, ಮೂರ್ಖ) ಹುಚ್ಚನೆಂದು ಕರೆಯತೊಡಗಿದರು.

 ಸಂತ ಗೊಪಾಲದಾಸರು ಆಗ್ರಹ ಮಾಡುವುದರಿಂದ ಸಂತ ಗರೀಬ್‌ದಾಸರ ಅಮೃತ ವಾಣಿಯಿಂದ ಅಮರ ಗ್ರಂಥದ ರಚನೆ

ಈ ಘಟನೆಯ 3 ವರ್ಷಗಳ ಬಳಿಕ ಒಬ್ಬ ಗೋಪಾಲದಾಸನೆಂಬ ಸಂತ ಛುಡಾನೀ ಊರಿಗೆ ಬಂದರು. ಅವರು ದಾದೂದಾಸರ ಪಂಥದಿAದ ದೀಕ್ಷಿತರಾಗಿದ್ದರು. ಅವರು ಸಂತರ ವಾಣಿಗಳನ್ನು ಅರ್ಥೈಸುತ್ತಿದ್ದರು. ಅವುಗಳ ಮಹತ್ವವನ್ನು ಅರಿಯುತ್ತಿದ್ದರು. ಅವರು ವೈಶ್ಯ ಜಾತಿಯವರಾಗಿದ್ದರು. ಸಂತರ ವೇಶಭೂಷದಲ್ಲಿರುತ್ತಿದ್ದರು. ವ್ಯಾಪಾರಿಯ ಮನೆಯಲ್ಲಿ ಜನ್ಮಿಸಿದ ಕಾರಣ ಸ್ವಲ್ಪ ಓದಿ ಬರವಣಿಗೆಯನ್ನೂ ಕಲಿತಿದ್ದ. ಮನೆ ತ್ಯಜಿಸಿ ಸನ್ಯಾಸ ಸ್ವೀಕರಿಸಿದ್ದ. ಹೆಚ್ಚಾಗಿ ಭ್ರಮಣಿಸುತ್ತಲೇ ಇರುತ್ತಿದ್ದ. ಊರೂರುಗಳಿಗೆ ಹೋಗಿ ಪ್ರಚಾರ ಮಾಡುತ್ತಿದ್ದ. ಕೆಲವು ಶಿಷ್ಯರನ್ನೂ ಮಾಡಿಕೊಂಡಿದ್ದ. ಅವರಿಗೊಬ್ಬ ಬೈರಾಗಿ (ವಿರಕ್ತಿ) ಜಾತಿಯ ಛುಡಾನೀ ಊರಿನ ಶಿಷ್ಯನೂ ಇದ್ದ. ಇವರು ಅವನ ಮನೆಯಲ್ಲಿ ಉಳಿದುಕೊಂಡಿದ್ದರು. ಆ ಶಿಷ್ಯನು ಸಂತ ಗೋಪಾಲದಾಸರೊಡನೆ ಹೇಳಿದ ಹೇ ಗುರುದೇವ! ನಮ್ಮ ಊರಿನ ಚೌಧರೀಯ ಮಗಳ ಮಗ ಯಾವುದೋ ಸಾಧುವಿನ ಬೆದರಿಕೆಯಿಂದಾಗಿ ಹುಚ್ಚನಾಗಿರುವನು. ಅವನಂತು ಸತ್ತು ಹೋಗಿದ್ದ, ಚಿತೆಯ ಮೇಲೆ ಇಡಲಾಗಿತ್ತು. ಹುಡುಗಿ ರಾಣಿಯ ಅದೃಷ್ಟದಿಂದ ಮಗು ಜೀವಂತನಾದನು, ಆದರೆ ಹುಚ್ಚನಾಗಿದ್ದಾನೆ ಎಲ್ಲಾ ಕಡೆ ಮಂತ್ರ-ತAತ್ರ ಮಾಡುವವರಿಂದಲೂ ಚಿಕಿತ್ಸೆ ಮಾಡಲಾಯ್ತು.

ಬೇರೆ ಔಷಧಿ, ಹುಚ್ಚುತನ ಬಿಡಿಸುವಂಥದ್ದು ಬಹಳಷ್ಟು ತಿನ್ನಿಸಲಾಯ್ತು, ಆದರೆ ಯಾವ ಶಾಂತಿಯೂ ಆಗಲಿಲ್ಲ. ಆ ಶಿಷ್ಯ ಎಲ್ಲಾ ಘಟನೆಗಳನ್ನೂ ಹೇಳಿದ. ಆ ಕುವರೀ ಹಸುವಿನ ಹಾಲು ತೆಗೆದು ಮಗು ಗರೀಬ್‌ದಾಸನಿಗೆ ಕುಡಿಸಿದ ಘಟನೆ ನಡೆದಿತ್ತು. ಮತ್ತೆ ಆತ ಹೇಳಿದ ಏನೆಂದರೆ ಸಂತರ ವಿದ್ಯೆಯನ್ನು ಸಂತರೇ ಬಗೆಹರಿಸಲು ಸಾಧ್ಯ. ಸ್ವಲ್ಪಕೃಪೆ ತೋರಿ ಗುರುದೇವ! ಸಂತಗೋಪಾಲದಾಸರು ಹೇಳಿದರು – ಕರೆ ಆ ಹುಡುಗನನ್ನು. ಶಿಷ್ಯನು ಚೌಧರೀ ಶಿವಲಾಲರಲ್ಲಿ ಹೇಳಿದ – ನನ್ನಮನೆಗೆ ಒಬ್ಬ ಬಾಬಾ ಬಂದಿದ್ದಾರೆ. ನಾನು ಅವರಿಗೆ ತಮ್ಮ ಮೊಮ್ಮಗ ಗರೀಬ್‌ದಾಸನ ಬಗ್ಗೆ ಹೇಳಿರುವೆನು. ಬಾಬಾರವರು ಒಂದು ಬಾರಿ ಬರಲು ಕರೆ ನೀಡಿದ್ದಾರೆ, ಸರಿಹೋಗುವನು. ಒಂದು ಬಾರಿ ತೋರಿಸಿ ಬಿಡಿ, ಈಗಂತು ಊರಿನಲ್ಲಿಯೇ ಸಾಧು ಬಂದಿದ್ದಾರೆ. ಬಹಳ ಸರ್ಮಥ ಸಂತ.

ಶಿವಲಾಲರೊಡನೆ ಊರಿನ ಹಲವು ಬೇರೆ ವ್ಯಕ್ತಿಗಳೂ ಬಾಬಾ ಬಳಿ ಹೋದರು. ಜೊತೆಯಲ್ಲಿ ಮಗು ಗರೀಬ್‌ದಾಸರನ್ನೂ ಕರೆದೊಯ್ದರು. ಸಂತ ಗೋಪಾಲದಾಸರು ಬಾಲಕ ಗರೀಬ್‌ದಾಸರೊಡನೆ ಪ್ರಶ್ನಿಸಿದರು.

ಮಗೂ! ಅವರು ಯಾರು ಸಾಧು ಆಗಿದ್ದವರು? ಅವರು ನಿನ್ನ ಜೀವನ ನಾಶಮಾಡಿದವರು? ಪ್ರಿಯ ವಾಚಕರೇ ಇಲ್ಲಿ ಇದನ್ನು ಹೇಳುವುದು ಅನಿವಾರ್ಯ. ಎಂದರೆ ಸಂತ ಗೋಪಾಲದಾಸರು ಸಂತ ದಾದೂದಾಸರ ಪಂಥದಿAದ ದೀಕ್ಷಿತರಾಗಿದ್ದರು. ಸಂತ ದಾದೂರವರಿಗೂ ಸಂತ ಗರೀಬ್‌ದಾಸರಂತೆ 7 ವರ್ಷದ ವಯಸ್ಸಿನಲ್ಲಿ (ಒಂದು ಪುಸ್ತಕದಲ್ಲಿ 11 ವರ್ಷದ ವಯಸ್ಸಿನಲ್ಲಿ ಜೀವಂತ ಬಾಬಾ ಸಿಕ್ಕಿದ್ದರು. ನಾನು ಜ್ಞಾನ ಅರಿಯಬೇಕು. ವ್ಯರ್ಥ ತರ್ಕ ವಿತರ್ಕದಲ್ಲಿ ಬೀಳಬಾರದು). ಬಾಬಾ ಜೀವಂತದ ವೇಶದಲ್ಲಿ ಪರಮೇಶ್ವರ ಕಬೀರರು ಸಿಕ್ಕಿದ್ದರು. ಸಂತ ದಾದೂರವರಿಗೆ ಕೂಡಾ ಪರಮೆಶ್ವರರು ಶರೀರದಿಂದ ತೆಗೆದು ಸತ್ಯಲೋಕಕ್ಕೆ ಒಯದಿದ್ದರು. ಸಂತ ದಾದೂರವರು 3 ದಿನ-ರಾತ್ರಿ ಅಚೇತನಾವಸ್ಥೆಯಲ್ಲಿದ್ದರು. ಮೂರನೇ ದಿನ ಮರಳಿ ಸಚೇತನ ಗೊಂಡಿದ್ದರು. ಎಂದರೆ ನಾನು ಪರಮೇಶ್ವರ ಕಬೀರರೊಡನೆ ಅಮರಲೋಕಕ್ಕೆ ಹೋಗಿದ್ದೆ. ಅವರು ಜಗತ್ತಿಗೆ ದೊಡ್ಡ ಕಬೀರರು. ಅವರು ಎಲ್ಲರನ್ನು ರಚಿಸುವನಾತ, ಸರ್ವ ಸೃಷ್ಟಿಯ ರಚನಾಹಾರನು.

 ಸಂತ ಗರೀಬ್‌ದಾಸರ ಅಮೃತ ವಾಣಿಯಲ್ಲಿ ಪರಮಾತ್ಮ ಕಬೀರ ಸಾಹೇಬರ ಮಹಿಮೆ

ಜಿನ್ ಮ್ಹಜ್ ಕೊ ನಿಜ್ ನಾಮ್‌ದಿಯಾ, ಸೋಯೀ ಸತ್‌ಗುರು ಹಮಾರ್/

ದಾದೂ ದೂಸ್‌ರಾ ಕೋಯೀ ನಹೀಂ, ಕಬೀರ್ ಸಿರ್‌ಜನ್ ಹಾರ್// 1

ದಾದೂ ನಾಮ್ ಕಬೀರ್‌ಕೀ, ಜೈ ಕೋಯೀ ಲೇವೆ ಓಟ್/

ಉನ್‌ಕೊ ಕಬಹು ಲಾಗೇ ನಾಹೀಂ, ಕಾಲ್ ವಜ್ರ್ ಕೀ ಚೋಟ್//2

ಅಬ್‌ಹೀ ತೇರೀ ಸಬ್ ಮಿಟೈ, ಕಾಲ್ ಕರ್ಮ್ಕೀ ಪೀಡ್ (ಪೀರ್)/

ಶ್ವಾಸ್-ಉಸ್ವಾಸ್ ಸುಮರಲೇ, ದಾದೂ ನಾಮ್ ಕಬೀರ್// 3

ಕೆಹರೀ ನಾಮ್ ಕಬೀರ್ ಕಾ, ವಿಷಮ್ ಕಾಲ್‌ಗಜ್‌ರಾಜ್/

ದಾದೂ ಭಜನ್ ಪ್ರತಾಪ್ ಸೆ ಭಾಗೇ ಸುನತ್ ಆವಾಜ್// 4

ಈ ಪ್ರಕಾರ ದಾದೂರವರ ಗ್ರಂಥದಲ್ಲಿ ವಾಣೀ ಬರೆಯಲಾಗಿದೆ. ಗೋಪಾಲ್ ದಾಸ್ ಈ ಮಾತನ್ನು ತಿಳಿದಿದ್ದರು. ಎಂದರೆ ದಾದೂರವರಿಗೆ ಮುದಿ ಬಾಬಾನರೂಪದಲ್ಲಿ ಪರಮಾತ್ಮ ಸಿಕ್ಕಿದ್ದರು. ದಾದೂರವರು ಮುಸಲ್ಮಾನ ಗಾಣಿಗರಾಗಿದ್ದರು. ಇದಕ್ಕಾಗಿ ಮುಸಲ್ಮಾನ ಸಮಾಜವು ‘ಕಬೀರ’ ಅರ್ಥವನ್ನು ‘ದೊಡ್ಡದು’ ಮಾಡುತ್ತದೆ. ಈ ಕಾರಣದಿಂದ ಕಾಶೀಯ ಕಬೀರ ನೇಕಾರನನ್ನು ಒಪ್ಪುವುದಿಲ್ಲ. ದಾದೂ ಪಂಕ್ತಿ ಹೇಳುತ್ತದೆ ಏನೆಂದ್ರೆ ‘ಕಬೀರ’ದ ಅರ್ಥ ದೊಡ್ಡ ಭಗವಂತ ಅಲ್ಲಾಹು ಕಬೀರ ಅಂದರೆ ಅಲ್ಲಾಹ್ ಕಬೀರ.

ಇದೇ ಪ್ರಕಾರ ಶ್ರೀ ನಾನಕ ದೇವರು ಸುಲ್ತಾನಪುರ ಶಹರಿನ ಬಳಿ ಹರಿವ ಬೇಯೀ ನದಿಯಲ್ಲಿ ಸ್ನಾನ ಮಾಡಲು ಹೋದರು. ಪರಮಾತ್ಮ ಜೀವಂತ ಬಾಬಾರವರ ರೂಪದಿ ಆ ಸಮಯ ಸಿಕ್ಕಿದ್ದರು. ಅವರಿಗೂ 3 ದಿನಗಳ ತನಕ ತನ್ನೊಡನೆ ಇಟ್ಕೊಂಡಿದ್ದರು. ಸತ್ಯಖಂಡಕ್ಕೆ (ಸತ್ಯಲೋಕ) ಕರೆದೊಯ್ದಿದ್ದರು. ಮತ್ತೆ ಮರಳಿ ಬಿಟ್ಟಿದ್ದರು. ಒಬ್ಬ ಅಬ್ರಾಹಿಂ ಸುಲ್ತಾನ್ ಅಧಂ ಹೆಸರಿನ ಬಲಖ್ ಬುಖಾರೇ ಶಹರಿನ ರಾಜನಾಗಿದ್ದ. (ಇರಾಕ್ ದೇಶದಲ್ಲಿ ಇರುವಾತ) ಅವನಿಗೂ ಪರಮಾತ್ಮ ಜೀವಂತ ಬಾಬಾರವರ ರೂಪದಲ್ಲಿ ಸಿಕ್ಕಿದ್ದರು. ಅವನನ್ನೂ ಕಬೀರ ಪರಮಾತ್ಮನು ಉದ್ಧರಿಸಿದರು.

ಸಂತ ಗೋಪಾಲ್‌ದಾಸರು ಮಗು ಗರೀಬ್‌ದಾಸರಿಗೆ ಪ್ರಶ್ನೆ ಮಾಡಿದ್ದರು. ನಿನಗೆ ಯಾರು ಬಾಬಾ ಸಿಕ್ಕಿದ್ದರು? ನಿನ್ನ ಜೀವನ ನಾಶ ಮಾಡಿದರು ಯಾರು! ಸಂತ ಗರೀಬ್‌ದಾಸರು ಉತ್ತರಿಸಿದರೇನೆಂದರೆ, ಹೇ ಮಹಾತ್ಮರೇ! ಯಾವ ಬಾಬಾ ನನಗೆ ಸಿಕ್ಕಿದ್ದರೋ, ಅವರು ನನ್ನನ್ನು ಉದ್ಧರಿಸಿದರು, ನನ್ನ ಜೀವನವನ್ನು ಉಜ್ವಲಗೊಳಿಸಿದರು. ಅವರು ಪೂರ್ಣ ಪರಮಾತ್ಮರಾಗಿದ್ದಾರೆ.

ಗರೀಬ್, ಹಮ್ ಸುಲ್ತಾನೀ ನಾನಕ್ ತಾರೆ, ದಾದೂ ಕೂಂ ಉಪದೇಶ್ ದಿಯಾ/ ಜಾತಿ ಜುಲಾಹಾ ಭೇದ್ ನಹೀಂ ಪಾಯಾ, ಕಾಶೀ ಮಾಹೆ ಕಬೀರ್ ಹುವಾ// 1

ಗರೀಬ್, ಅನಂತ್ ಕೋಟಿ ಬ್ರಹ್ಮಾಂಡ್ ಕಾ, ಏಕ್ ರತೀ ನಹೀಂ ಭಾರ್/ ಸತ್ಗುರು ಪುರುಷ್ ಕಬೀರ್ ಹೈಂ, ಕುಲ್ ಕೆ ಸಿರ್ ಜನ್ ಹಾರ್// 2

ಗರೀಬ್, ಸಬ್ ಪದವೀ ಕೆ ಮೂಲ್ ಹೈ, ಸಕಲ್ ಸಿದ್ಧಿ ಹೈ ತೀರ್

ದಾಸ್ ಗರೀಬ್ ಸತ್ಪುರುಷ್ ಭಜೋ ಅವಿಗತ್ ಕಲಾ ಕಬೀರ್// 3

ಗರೀಬ್, ಅಜಬ್ ನಗರ್ ಮೆಂ ಲೇ ಗಯೇ, ಹಂ ಕೊ ಸತ್ಗುರು ಆನ್/ ಝಿಲ್ಕೆ ಬಿಂಬ್ ಅಗಾಧ್ ಗತಿ ಸುತೆ ಚಾದರ್ ತಾನ್// 4

ಗರೀಬ್, ಶಬ್ದ್ ಸ್ವರೂಪೀ ಉತರೇ, ಸತ್ಗುರು ಸತ್ ಕಬೀರ್/

ದಾಸ್ ಗರೀಬ್ ದಯಾಲ್ ಹೈ, ಡಿಗೇ ಬಂಧಾವೇ ಥೀüÃರ್// 5

ಗರೀಬ್, ಅಲಲ್ ಪಂಖ್ ಅನುರಾಗ್ ಹೈ, ಸುನ್ ಮಂಡಲ್ ರಹ್ ಧೀರ್/

ದಾಸ್ ಗರೀಬ್ ಉಧಾರಿಯಾ, ಸತ್ಗುರು ಮಿಲೇ ಕಬೀರ್// 6

ಗರೀಬ್, ಪ್ರಪಟನ್ ವಹ್ ಲೋಕ್ ಹೈ, ಜಹಾಂ ಅದಲೀ ಸದ್ಗುರು ಸಾರ್/

ಭಕ್ತಿ ಹೇತ್ ಸೆ ಉತರೇ, ಪಾಯಾ ಹಮ್ ದೀದಾರ್// 7

ಗರೀಬ್, ಐಸಾ ಸತ್‌ಗುರು ಹಂ ಮಿಲ್ಯಾ, ಹೈ ಜಿಂದಾ ಜಗದೀಶ್/

ಸುನ್ನ್ ವಿದೇಶೀ ಮಿಲ್ ಗಯಾ, ಛತ್ರ್ ಮುಕುಟ್ ಹೈ ಶೀಶ್// 8

ಗರೀಬ್, ಜಂ ಔರಾ ಜಾಸೇ ಡರೆಂ, ಧರ್ಮ್ರಾಯ್ ಧರೈ ಧೀರ್/

ಐಸಾ ಸತ್ಗುರು ಏಕ್ ಹೈ, ಅದಲೀ ಅಸಲ್ ಕಬೀರ್// 9

ಗರೀಬ್, ಮಾಯಾ ಕಾ ರಸ್ ಪೀಯ್ ಕರ್, ಹೋ ಗಯೇ ಡಾಮಾಡೋಲ್/

ಐಸಾ ಸದ್ಗುರು ಹಂ ಮಿಲ್ಯಾ, ಜ್ಞಾನ್ ಯೋಗ್ ದಿಯಾ ಖೋಲ್// 10

ಗರೀಬ್, ಜಂ ಔರಾ ಜಾಸೇ ಡರೇಂ, ಮಿಟೆಂ ಕರ್ಮ್ ಕೆ ಲೇಖ್/

ಅದಲೀ ಅಸಲ್ ಕಬೀರ್ ಹೈ, ಕುಲ್‌ಕೆ ಸತ್ಗುರು ಏಕೆ// 11

 ಸಂತ ಗರೀಬ್‌ದಾಸರಿಗೆ ಯಾರು ಸಿಕ್ಕಿದ್ದರು? ಬಾಬಾರವರಿಗೆ ಅವರ ಪರಿಚಯ ನೀಡಿದರು. ಮೇಲೆ ಬರೆದಿರುವಂಥಹ ವಾಣಿಗಳಲ್ಲಿ ಸಂತ ಗರೀಬ್‌ದಾಸರು ಸ್ಪಷ್ಟಪಡಿಸಿದ್ದಾರೆ, ಏನೆಂದ್ರೆ ಆ ಪರಮೇಶ್ವರ ಕಬೀರರು ನಮಗೆಲ್ಲರಿಗೂ ಸಂತ ಗರೀಬ್‌ದಾಸ್, ಸಂತ ದಾದೂ ದಾಸ್, ಸಂತ ನಾನಕ ದೇವ ಹಾಗೂ ರಾಜ ಅಬ್ರಾಹಿಂ ಸುಲ್ತಾನಿ ಮೊದಲಾದವರನ್ನು ಪಾರುಗೊಳಿಸಿದರು. ಅವರು ಭರತ ವರ್ಷದ ಕಾಶೀ ಶಹರಿನಲ್ಲಿ ಕಬೀರ ನೇಕಾರ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ.ಅವನು ಅನಂತ ಕೋಟಿ ಬ್ರಹ್ಮಾಂಡಗಳ ರಚಿಸಿದವನಾಗಿದ್ದಾನೆ. ಅವನು ನನಗೆ ಸಿಕ್ಕಿದ್ದನು. ಈ ಮೇಲಿನ ವಾಣೀ ಹೇಳಿ ಸಂತ ಗರೀಬ್‌ದಾಸ 13 ವರ್ಷಗಳ ಬಾಲಕ ಹೊರಟು ಬಿಟ್ಟರು. ಸಂತ ಗೋಪಾಲದಾಸರು ಅರಿತು ಬಿಟ್ಟರು, ಎಂದರೆ ಇವನು ಸಾಮಾನ್ಯ ಬಾಲಕನಲ್ಲ. ಇವನಂತು ಪರಮಾತ್ಮನೊಡನೆ ಸಿಕ್ಕಿರುವನು. ಇಂಥಹ ಅಮೃತ ವಾಣೀ ಹೇಳುತ್ತಿದ್ದಾನೆ. ಈ ವಾಣಿಯನ್ನು ಬರೆಯ ಬೇಕಾಗಿದೆ.

 ಹೀಗೆ ವಿಚಾರ ಮಾಡಿ ಬಾಲಕ ಗರೀಬ್‌ದಾಸರ ಹಿಂದಿAದೆ ಹೊರಟು ಬಿಟ್ಟರು ಮತ್ತು ಹೇಳತೊಡಗಿದರು – ಹೇ ಊರಿನ ಜನರೇ! ಈ ಬಾಲಕ ಹುಚ್ಚ, ಮೂರ್ಖನಲ್ಲ. ನೀವು ಹುಚ್ಚರು ಇವನು ಏನು ಹೇಳುತ್ತಿದ್ದಾನೆಂದು ನೀವು ಅರಿಯಲಾರಿರಿ. ನನಗೆ ಗೊತ್ತಾಗಿದೆ. ಈ ಬಾಲಕನು ಪ್ರಭುವಿನ ಅವತಾರವಾಗಿರುವನು. ಇವನಿಗೆ ಜೀವಂತ ಸಾಧುವಿನ ರೂಪದಲ್ಲಿ ಸ್ವತಃ ಭಗವಂತ ಸಿಕ್ಕಿದ್ದರು. ಇದೇ ರೀತಿ ನಮ್ಮ ಪೂಜ್ಯ ದಾದೂ ಸಾಹೇಬರಿಗೂ ಸಿಕ್ಕಿದ್ದರು. ದಾದೂರವರ ಎಲ್ಲಾ ವಾಣಿಗಳನ್ನು ಬರೆಯಲಾಗಿರಲಿಲ್ಲ. ಈಗ ಈ ಬಾಲಕನಿಂದ ಎಲ್ಲಾ ವಾಣಿಗಳನ್ನು ಬರೆಯಿಸುವೆನು. ನಾನು ಸ್ವತಃ ಬರೆಯುವೆನು. ಈ ವಾಣಿಗಳು ಕಲಿಯುಗದಲ್ಲಿ ಅನೇಕ ಜೀವಗಳ ಉದ್ಧಾರ ಮಾಡುವುವು. ಸಂತ ಗೋಪಾಲದಾಸರು ಪದೇ-ಪದೇ ಆಗ್ರಹ ಮಾಡಿರುವುದರಿಂದ ಸಂತ ಗರೀಬ್‌ದಾಸರು ಹೇಳಿದರು – ಗೋಪಾಲ ದಾಸರೇ ಒಂದೊಮ್ಮೆ ಪೂರ್ತಿ ವಾಣಿ ಬರೆಯುವುದಾದರೆ ನಾನು ಬರೆಯಿಸುವೆನು, ಎಲ್ಲಾದರೂ ಮಧ್ಯದಲ್ಲಿ ಬಿಟ್ಟರಂತು ಬರೆಯಿಸಲಾರೆನು. ಸಂತ ಗೋಪಾಲದಾಸರು ಹೇಳಿದರು – ಮಹಾರಾಜರೇ ನಾನಂತು ಮನೆಯಿಂದ ಹೊರಟು ಬಿಟ್ಟಿದ್ದೇನೆ. ಪರಮಾರ್ಥ ಮತ್ತು ಕಲ್ಯಾಣ ಮಾಡಲಿಕ್ಕಾಗಿ, ನನ್ನದು 62 ವರ್ಷಗಳ ವಯಸ್ಸಾಗಿದೆ. ನನಗೆ ಇದಕ್ಕಿಂತ ಒಳ್ಳೆಯ ಯಾವುದೇ ಕಾರ್ಯವಿಲ್ಲ. ತಾವು ಕೃಪೆ ಮಾಡಿ. ಆಗ ಸಂತ ಗರೀಬ್‌ದಾಸರು ಹಾಗೂ ಸಂತ ಗೋಪಾಲದಾಸರು ಬೋರೇ ಹಣ್ಣಿನ ತೋಟದಲ್ಲಿ ಒಂದು ಬನ್ನೀಯ ಕೆಳಗೆ ಕುಳಿತು ವಾಣಿ ಬರೆಯಲು, ಬರೆಯಿಸಲು ತೊಡಗಿದರು. ಆ ಬೋರೇ ಹಣ್ಣಿನ ತೋಟ ಸಂತ ಗರೀಬ್‌ದಾಸರದೇ ಆಗಿತ್ತು. ಆ ಸಮಯ ಛುಡಾನೀ ಊರಿನ ಅಕ್ಕ ಪಕ್ಕದಲ್ಲಿ ಮರಳುಗಾಡು ಪ್ರದೇಶವಿತ್ತು ಎಂದರೆ ರಾಜಸ್ಥಾನದಲ್ಲಿದ್ದಂತೆ. ಅಲ್ಲಿ ಬನ್ನೀ ಮರಗಳು ಅಧಿಕವಾಗಿರುತ್ತವೆ. ಅವುಗಳ ನೆರಳಿನ ಉಪಯೋಗವೇ ಹೆಚ್ಚಾಗಿರುತ್ತದೆ. ಈ ರೀತಿ ಸಂತ ಗರೀಬ್‌ದಾಸರು ಪರಮಾತ್ಮನಿಂದ ಪ್ರಾಪ್ತಿಸಿದ ತತ್ವಜ್ಞಾನ, ಕಣ್ಗಳಿಂದ ನೋಡಿದ ಸ್ಥಿತಿಗತಿ ವಾಣೀ ರೂಪದಲ್ಲಿ ಹೇಳಿದರು ಅಂತೆಯೇ ಸಂತ ಗೋಪಾಲದಾಸರು ಬರೆದರು. ಸರಿ ಸುಮಾರು 6 ತಿಂಗಳುಗಳು ಈ ಕೆಲಸ ಮಾಡಲಾಯ್ತು. ಮತ್ತೆ ಆಗಾಗ ಯಾರೊಡನೆಯಾದರೂ ಮಾತುಕತೆಯಾದರೆ ಸಂತ ಗರೀಬ್‌ದಾಸರು ವಾಣೀ ಹೇಳುತ್ತಿದ್ದರೆ ಬೇರೆ ವ್ಯಕ್ತಿಗಳೂ ಬರೆಯುತ್ತಿದ್ದರು. ಇವೆಲ್ಲವುಗಳನ್ನು ಸೇರಿಸಿ ಒಂದು ಗ್ರಂಥರೂಪದಲ್ಲಿ ಕೈಯಿಂದ ಬರೆಯಲಾಗಿತ್ತು. ಸಂತ ಗರೀಬ್‌ದಾಸರ ಸಮಯದಿಂದಲೇ ಈ ಗ್ರಂಥದ ಪಾಠ ಮಾಡಲು ಪ್ರಾರಂಭವಾಯ್ತು. ಇದನ್ನು ಕೆಲವು ವರ್ಷಗಳ ಪೂರ್ವದಲ್ಲಿ ಟೈಪ್ ಮಾಡಿಸಲಾಯ್ತು. ಇದರ ಹೊರತು ಪರಮೇಶ್ವರ ಕಬೀರರು ಆ ಸೂಕ್ಷö್ಮ ವೇದವನ್ನು ತನ್ನ ಮುಖ ಕಮಲದಿಂದ ಹೇಳಿದ್ದರು. ಆ ಅಮೃತ ಸಾಗರ (ಕಬೀರ ಸಾಗರ)ದಿಂದ ತೆಗೆದು ಕೆಲವು ಅಮೃತ ವಾಣಿಗಳನ್ನು ಗ್ರಂಥದ ಅಂತ್ಯದಲ್ಲಿ ಬರೆದಿದೆ. ಈ ಪವಿತ್ರ ಅಮೃತವಾಣಿಯ ಪುಸ್ತಕಕ್ಕೆ ಅಮರ ಗ್ರಂಥವೆAದು ಹೆಸರು ನೀಡಲಾಗಿದೆ. ಈ ಅಮೃತ ವಾಣಿಯ ಈಗ ಸರಳಾರ್ಥ ಪ್ರರಾಂಭಿಸಲಾಗುತ್ತದೆ.

  • ಲೇಖಕ ಹಾಗೂ ಸರಳಾರ್ಥ ಕರ್ತ:-
  • (ಸಂತ) ರಾಂಪಾಲ್‌ದಾಸ್
  • ಸತ್‌ಲೋಕ ಆಶ್ರಮ,
  • ಟೋಹಾನಾ ರಸ್ತೆ, ಬರ್ವಾಲಾ | ಜಿಲ್ಲೆ ಹಿಸಾರ್ (ಹರಿಯಾಣ)

Latest articles

26/11 Mumbai Terror Attack: The Heart Wrenching Story of 26/11

Last Updated on 24 November 2024 IST: In remembrance of the deadly 26/11 Mumbai...

Guru Tegh Bahadur Martyrdom Day 2024: Revelation From Guru Granth Sahib Ji

Last Updated on 23 November 2024 | Guru Tegh Bahadur Martyrdom Day | Guru...

National Constitution Day 2024: Know How Our Constitution Can Change Our Lives

Every year 26 November is celebrated as National Constitution Day in the country, which commemorates the adoption of the Constitution of India

National Constitution Day 2024 [Hindi]: जानें 26 नवम्बर को, संविधान दिवस मनाए जाने का कारण, महत्व तथा इतिहास

National Constitution Day 2024 : 26 नवम्बर का दिन भारतीय लोकतंत्र के लिए एक...
spot_img

More like this

26/11 Mumbai Terror Attack: The Heart Wrenching Story of 26/11

Last Updated on 24 November 2024 IST: In remembrance of the deadly 26/11 Mumbai...

Guru Tegh Bahadur Martyrdom Day 2024: Revelation From Guru Granth Sahib Ji

Last Updated on 23 November 2024 | Guru Tegh Bahadur Martyrdom Day | Guru...

National Constitution Day 2024: Know How Our Constitution Can Change Our Lives

Every year 26 November is celebrated as National Constitution Day in the country, which commemorates the adoption of the Constitution of India